BBMP ಬಜೆಟ್ 2024: ಕಾರ್ಪೊರೇಷನ್ ಶಾಲಾ/ಕಾಲೇಜು ವಿದ್ಯಾರ್ಥಿಗಳು, ಪೋಷಕರಿಗೆ ‘ಆಯುಷ್ಮಾನ್ ಭಾರತ್’ ವಿಮೆ!

BBMP BUDGET 2024

BBMP ಬಜೆಟ್ 2024: ಕಾರ್ಪೊರೇಷನ್ ಶಾಲಾ/ಕಾಲೇಜು ವಿದ್ಯಾರ್ಥಿಗಳು, ಪೋಷಕರಿಗೆ ‘ಆಯುಷ್ಮಾನ್ ಭಾರತ್’ ವಿಮೆ!

ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಬಿಬಿಎಂಪಿ ಭರ್ಜರಿ ಬಹುಮಾನ ನೀಡಿದೆ. ಪಾಲಿಕೆಯ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ವಿಮಾ ಯೋಜನೆಯಡಿ ಉಚಿತ ಆರೋಗ್ಯ ವಿಮೆ (ಆಯುಷ್ಮಾನ್ ಭಾರತ್) ನೀಡಲು ನಿರ್ಧರಿಸಲಾಗಿದೆ.

BBMP BUDGET 2024
BBMP BUDGET 2024

ಇಂದು (ಗುರುವಾರ) ಮಂಡಿಸಿದ ಬಿಬಿಎಂಪಿ ಬಜೆಟ್ 2024 ರಲ್ಲಿ ಈ ಘೋಷಣೆ ಮಾಡಲಾಗಿದೆ. ಸ್ವಯಂ ಸೇವಾ ಸಂಸ್ಥೆಗಳ ಸಹಭಾಗಿತ್ವದಲ್ಲಿ ಪಾಲಿಕೆಯ ಶಾಲಾ/ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಆರೋಗ್ಯ ಸುಧಾರಿಸಲು ವೈದ್ಯಕೀಯ ತಪಾಸಣೆ ಮತ್ತು ಔಷಧ ವಿತರಣೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.

Leave a Comment