Home Gourds Recruitment 2024 | ಗೃಹರಕ್ಷಕ ದಳಕ್ಕೆ ನೇಮಕಾತಿ

Home Gourds Recruitment 2024

ಗೃಹರಕ್ಷಕ ದಳಕ್ಕೆ ನೇಮಕಾತಿ :  ತಕ್ಷಣ ಅರ್ಜಿ ಸಲ್ಲಿಸಿ ಮೈಸೂರು ಜಿಲ್ಲೆಯ ವಿವಿಧ ಘಟಕಗಳಲ್ಲಿ ಖಾಲಿ ಇರುವ ಗೃಹರಕ್ಷಕ ದಳದ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಮೈಸೂರು: ಗೃಹರಕ್ಷಕ ದಳಕ್ಕೆ ಸೇರಬೇಕೆಂದರೆ ಇಲ್ಲಿದೆ ಸುವರ್ಣಾವಕಾಶ. ಮೈಸೂರು ಜಿಲ್ಲಾ ಗೃಹರಕ್ಷಕ ದಳದ ಕಛೇರಿ ವ್ಯಾಪ್ತಿಯ ಮೈಸೂರು, ನಂಜನಗೂಡು, ದೊಡ್ಡ ಕವಲಂದೆ, ಟಿ.ನರಸೀಪುರ, ಎಚ್.ಡಿ.ಕೋಟೆ, ಹ್ಯಾಂಡ್ ಪೋಸ್ಟ್, ಸರಗೂರು, ಕೆ.ಆರ್.ನಗರ, ಹುಣಸೂರು, ಪ್ರಿಯಾಪಟ್ಟಣ ಘಟಕಗಳಲ್ಲಿ ಖಾಲಿ ಇರುವ ಗೃಹ ರಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.

ಉತ್ತಮ ಮೈಕಟ್ಟು ಹೊಂದಿರುವ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಸೇರಿಕೊಳ್ಳಬಹುದು.

How to Apply for this Job ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಮೈಸೂರು ಜಿಲ್ಲಾ ಗೃಹರಕ್ಷಕ ದಳದ ಕಛೇರಿಯಿಂದ ಪಡೆದು ಭರ್ತಿ ಮಾಡಿ ಫೆಬ್ರವರಿ 17 ರೊಳಗೆ ಕಛೇರಿಯಲ್ಲಿ ಸಲ್ಲಿಸಬೇಕು.

For More Information ಹೆಚ್ಚಿನ ವಿವರಗಳಿಗಾಗಿ : 
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಧಿಕಾರಿಗಳ ಕಛೇರಿ, ಗೃಹರಕ್ಷಕ ದಳ ಸರಸ್ವತಿಪುರಂ, ಮೈಸೂರು. ದೂರವಾಣಿ ಸಂಖ್ಯೆ 0821-2542877 ಮೂಲಕ ಸಂಪರ್ಕಿಸಬಹುದು.

Leave a Comment